ಡಿಸೆಂಬರ್ ೯ - ಡಿಸೆಂಬರ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೩ನೇ (ಅಧಿಕ ವರ್ಷದಲ್ಲಿ ೩೪೪ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೨೪ - ಆಯಕುಚೊ ಕಾಳಗದಲ್ಲಿ ಸ್ಪೇನ್ನ ಸೇನೆಯು ಪರಾಭವಗೊಂಡು ಪೆರುವಿನ ಸ್ವಾತಂತ್ರ್ಯ ಸಂಗ್ರಾಮದ ಅಂತ್ಯಗೊಂಡಿತು. ೧೯೦೫ - ಫ್ರಾನ್ಸ್ನಲ್ಲಿ ಸರ್ಕಾರ ಮತ್ತು ಧರ್ಮಗಳನ್ನು ಬೇರ್ಪಡಿಸುವ ಶಾಸನ ಚಲಾವಣೆಗೆ ಬಂದಿತು. ೧೯೪೭ - ಭಾರತದ ಸಂವಿಧಾನ ರಚನಾ ಸಭೆ ತನ್ನ ಕೆಲಸವನ್ನು ಪ್ರಾರಂಭಿಸಿತು. ೧೯೬೧ - ಟ್ಯಾಂಗನೀಕ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೯೦ - ಪೋಲೆಂಡ್ನ ಮೊದಲ ಜನತಂತ್ರ ಚುನಾಯಿತ ರಾಷ್ಟ್ರಪತಿಯಾಗಿ ಲೆಕ್ ವಲೇಸ ಆಯ್ಕೆ. == ಜನನ == ೧೬೦೮ - ಜಾನ್ ಮಿಲ್ಟನ್, ಆಂಗ್ಲ ಕವಿ. ೧೭೪೮ - ಕ್ಲೋಡ್ ಲುಯೀ ಬೆರ್ಟೋಲೇ, ಫ಼್ರಾನ್ಸ್‌ನ ಭೌತ ಮತ್ತು ರಸಾಯನ ವಿಜ್ಞಾನಿ ೧೮೨೫ - ತುಲಾ ರಾಮ್ ರಾವ್, ಸಿಪಾಯಿದಂಗೆಯ ಕ್ರಾಂತಿಕಾರಿ ನಾಯಕ ೧೯೪೬ - ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ೧೯೪೬ - ಶತ್ರುಘನ್ ಸಿನ್ಹಾ, ಹಿಂದಿ ಚಲನಚಿತ್ರ ರಂಗದ ನಟ == ಮರಣ == ೧೯೭೦ - ಫಿರೊಜ್ ಖಾನ್ ನೂನ್ - ಪಾಕಿಸ್ತಾನದ ಪ್ರಧಾನಮಂತ್ರಿ. == ದಿನಾಚರಣೆಗಳು == ಟಾನ್ಜೇನಿಯ - ಸ್ವಾತಂತ್ರ್ಯ ದಿನಾಚರಣೆ. ಪೆರು - ಸೇನಾ ದಿವಸ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ